¡Sorpréndeme!

ರಾಕಿಂಗ್ ಸ್ಟಾರ್ ಯಶ್ ಡಾ. ವಿಷ್ಣುವರ್ಧನ್ ಬಗ್ಗೆ ಹೇಳಿದ್ದು ಹೀಗೆ | Filmibeat Kannada

2017-11-20 1 Dailymotion

Rocking Star Yash releases the audio of Raja Simha movie & speaks about Dr Vishnuvardhan memorial.

ಡಾ.ವಿಷ್ಣುವರ್ಧನ್ ಪರ ನಿಂತ ರಾಕಿಂಗ್ ಸ್ಟಾರ್ ಯಶ್. 'ರಾಕಿಂಗ್ ಸ್ಟಾರ್' ಯಶ್... ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟರ ಲಿಸ್ಟ್ ನಲ್ಲಿರುವ ಕಲಾವಿದ. ಯುವ ಕಲಾವಿದರಿಗೆ ಸಾಥ್ ನೀಡುತ್ತಾ ವಿಭಿನ್ನ ಸಿನಿಮಾಗಳಿಗೆ ಹಾಗೂ ಹೊಸ ಪ್ರತಿಭೆಗಳಿಗೆ ಸಹಾಯ ಮಾಡುತ್ತಾ ಬೆಳೆಯುತ್ತಿರುವ ನಟ. ಚಿತ್ರರಂಗದಲ್ಲಿ ಮಾತ್ರವಲ್ಲದೆ ನಾಡಿನ ರೈತರಿಗೆ ಹಾಗೂ ಪರಿಸರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿರುವ ಯಶ್, ವಿಷ್ಣುವರ್ಧನ್ ರ ಸ್ಮಾರಕ ವಿಚಾರವಾಗಿ ಮಾತನಾಡಿದ್ದಾರೆ. 'ರಾಮಾಚಾರಿ' ಸಿನಿಮಾದಲ್ಲಿ ವಿಷ್ಣುದಾದರ ಅಭಿಮಾನಿಯಾಗಿದ್ದ 'ರಾಕಿಂಗ್ ಸ್ಟಾರ್' ಇಂದು ಸ್ಟೇಜ್ ಮೇಲೆ ನಿಂತು 'ಸಾಹಸ ಸಿಂಹ'ನಿಗೆ ಸಿಗಬೇಕಾದ ಗೌರವ ಸಿಗಲಿ ಎಂದಿದ್ದಾರೆ. ಅನಿರುದ್ಧ್ ಅಭಿನಯದ 'ರಾಜಸಿಂಹ' ಸಿನಿಮಾದ ಆಡಿಯೋ ರಿಲೀಸ್ ಇತ್ತೀಚೆಗಷ್ಟೇ ನಡೆದಿದೆ. ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾದ 'ರಾಕಿಂಗ್ ಸ್ಟಾರ್' ಯಶ್, ''ವಿಷ್ಣುದಾದಾ'ರಿಗೆ ಸಿಗಬೇಕಾದ ಗೌರವ ಸಿಗಬೇಕು. ಆ ಗೌರವ ಬೇಗ ಸಿಗಲಿ. ಇಲ್ಲವಾದಲ್ಲಿ ಅಭಿಮಾನಿಗಳಾದ ನಾವೇ ಆ ಗೌರವ ಸಿಗುವಂತೆ ಮಾಡುತ್ತೇವೆ'' ಎಂದಿದ್ದಾರೆ.